ಬಣ್ಣದ ಚಿನ್ನು (Colourful Chinnu)
Watch it on YouTube: https://www.youtube.com/watch?v=DksLYXNaLys
ಅಲ್ಲಿ ನೋಡಿ! ಯಾರು ಅದು?
Look over there! Who is that?
ಚಿನ್ನು! ಬಾತುಕೋಳಿ ಚಿನ್ನು!
Chinnu! Chinnu the duck!
ಬನ್ನಿ, ಬಣ್ಣ ಆಡೋಣ!
Come on, let's play with colours!
ಪುಟ್ಟ ಪುಟ್ಟ ಚಿನ್ನು, ಟಪ ಟಪ ಬಂತು
Little Chinnu came along, tap tap.
ಕೆಂಪು ಬಣ್ಣ ನೋಡಿ, ಡುಬುಕ್ ಅಂತ ಬಿತ್ತು!
She saw the red paint and fell in, splash!
ಕಾಲು ಕೆಂಪು, ರೆಕ್ಕೆ ಕೆಂಪು, ಕೊಕ್ಕೂ ಕೆಂಪು
Red feet, red wings, and a red beak too.
ಕೆಂಪು ಕೆಂಪು ಚಿನ್ನು, ಕ್ವಾಕ್ ಕ್ವಾಕ್ ನಕ್ಕಿತು
Red, red Chinnu laughed, quack quack!
ಚಿನ್ನು ಚಿನ್ನು, ಬಣ್ಣದ ಚಿನ್ನು!
Chinnu, Chinnu, colourful Chinnu!
ಕುಣಿ ಕುಣಿ, ಟಪ ಟಪ ಟಪ!
Dance, dance, tap tap tap!
ಯಾವ ಬಣ್ಣ ಆದ್ರೂ ಚಂದ!
Every colour looks lovely!
ಚಿನ್ನು ಚಿನ್ನು, ನಮ್ಮ ಚಿನ್ನು!
Chinnu, Chinnu, our Chinnu!
ಪುಟ್ಟ ಪುಟ್ಟ ಚಿನ್ನು, ಟಪ ಟಪ ಬಂತು
Little Chinnu came along, tap tap.
ನೀಲಿ ಬಣ್ಣ ನೋಡಿ, ಡುಬುಕ್ ಅಂತ ಬಿತ್ತು!
She saw the blue paint and fell in, splash!
ಕಾಲು ನೀಲಿ, ರೆಕ್ಕೆ ನೀಲಿ, ಕೊಕ್ಕೂ ನೀಲಿ
Blue feet, blue wings, and a blue beak too.
ನೀಲಿ ನೀಲಿ ಚಿನ್ನು, ಕ್ವಾಕ್ ಕ್ವಾಕ್ ನಕ್ಕಿತು
Blue, blue Chinnu laughed, quack quack!
ಚಿನ್ನು ಚಿನ್ನು, ಬಣ್ಣದ ಚಿನ್ನು!
Chinnu, Chinnu, colourful Chinnu!
ಕುಣಿ ಕುಣಿ, ಟಪ ಟಪ ಟಪ!
Dance, dance, tap tap tap!
ಯಾವ ಬಣ್ಣ ಆದ್ರೂ ಚಂದ!
Every colour looks lovely!
ಚಿನ್ನು ಚಿನ್ನು, ನಮ್ಮ ಚಿನ್ನು!
Chinnu, Chinnu, our Chinnu!
ಇನ್ನೊಂದು ಡಬ್ಬಿ! ಹಾರು, ಚಿನ್ನು, ಹಾರು!
Another tin! Jump, Chinnu, jump!
ಪುಟ್ಟ ಪುಟ್ಟ ಚಿನ್ನು, ಟಪ ಟಪ ಬಂತು
Little Chinnu came along, tap tap.
ಹಸಿರು ಬಣ್ಣ ನೋಡಿ, ಡುಬುಕ್ ಅಂತ ಹಾರಿತು!
She saw the green paint and jumped in, splash!
ಕಾಲು ಹಸಿರು, ರೆಕ್ಕೆ ಹಸಿರು, ಕೊಕ್ಕೂ ಹಸಿರು
Green feet, green wings, and a green beak too.
ಹಸಿರು ಹಸಿರು ಚಿನ್ನು, ಕ್ವಾಕ್ ಕ್ವಾಕ್ ನಕ್ಕಿತು
Green, green Chinnu laughed, quack quack!
ಚಿನ್ನು ಚಿನ್ನು, ಬಣ್ಣದ ಚಿನ್ನು!
Chinnu, Chinnu, colourful Chinnu!
ಕುಣಿ ಕುಣಿ, ಟಪ ಟಪ ಟಪ!
Dance, dance, tap tap tap!
ಯಾವ ಬಣ್ಣ ಆದ್ರೂ ಚಂದ!
Every colour looks lovely!
ಚಿನ್ನು ಚಿನ್ನು, ನಮ್ಮ ಚಿನ್ನು!
Chinnu, Chinnu, our Chinnu!
ಪುಟ್ಟ ಚಿನ್ನು ನೀರಿಗೆ, ಡುಬುಕ್ ಅಂತ ಹಾರಿತು!
Little Chinnu jumped into the water, splash!
ಚಪ್ ಚಪ್ ಚಪ್ ಚಪ್, ಬಣ್ಣ ತೊಳೆಯಿತು
Splish, splash, splish, splash, the paint washed off.
ಕೆಂಪು ಹೋಯ್ತು, ನೀಲಿ ಹೋಯ್ತು, ಹಸಿರೂ ಹೋಯ್ತು
Red is gone, blue is gone, green is gone too.
ಹಳದಿ ಹಳದಿ ಚಿನ್ನು, ಫಳ ಫಳ ಹೊಳೆಯಿತು!
Yellow, yellow Chinnu, shining bright!
ಕೆಂಪು ಡುಬುಕ್! ನೀಲಿ ಡುಬುಕ್!
Red, splash! Blue, splash!
ಹಸಿರು ಡುಬುಕ್! ಹಳದಿ ಚಿನ್ನು!
Green, splash! Yellow Chinnu!
ಕೆಂಪು ಡುಬುಕ್! ನೀಲಿ ಡುಬುಕ್!
Red, splash! Blue, splash!
ಹಸಿರು ಡುಬುಕ್! ಹಳದಿ ಚಿನ್ನು!
Green, splash! Yellow Chinnu!
ಚಿನ್ನು ಚಿನ್ನು, ಬಣ್ಣದ ಚಿನ್ನು
Chinnu, Chinnu, colourful Chinnu!
ಯಾವ ಬಣ್ಣ ಆದ್ರೂ ಚಂದ
Every colour looks lovely!
ಚಿನ್ನು ಚಿನ್ನು, ನಮ್ಮ ಚಿನ್ನು!
Chinnu, Chinnu, our Chinnu!
ಚಿನ್ನು ಚಿನ್ನು, ಬಣ್ಣದ ಚಿನ್ನು!
Chinnu, Chinnu, colourful Chinnu!
ಕುಣಿ ಕುಣಿ, ಟಪ ಟಪ ಟಪ!
Dance, dance, tap tap tap!
ಯಾವ ಬಣ್ಣ ಆದ್ರೂ ಚಂದ!
Every colour looks lovely!
ಚಿನ್ನು ಚಿನ್ನು, ನಮ್ಮ ಚಿನ್ನು!
Chinnu, Chinnu, our Chinnu!
Topics: ಪ್ರಾಣಿಗಳು Animals, Colours
More songs